Thursday, September 3, 2009

ಮಳೆ ತರದೇ ಓಡುವಾ ಮೋಡ

ಬಿತ್ತಿ ಬೆಳೆಗಾಗಿ -ಮಳೆಯ ಕಾಯುತಿರುವ ರೈತ, ಮಳೆಗರೆಯದೇ ಮುಖ ತೋರಿಸಿ ಓಡುವ ಮೋಡ ನೋಡಿ, ಆಕ್ರೋಶವ ವ್ಯಕ್ತ ಮಾಡುವ ಪರಿ- ಕವಿ ಈ ರೀತಿ ತನ್ನ ಶಬ್ದಗಳ ಜಾಲದಲ್ಲಿ ವರ್ಣಿಸಿದ್ದಾನೆ.

ಓಡು ಓಡು ಬೆನ್ನ ಹತ್ತು
ಓಡುತಿಹಳು ಕು೦ಭ ಹೊತ್ತು

ನೀನು ಬಿಡದೆ ಅವಳ ಮುತ್ತು
ಕಾಲನಾಗಿ ಅವಳ ಸುತ್ತು

ಮೂಗು ಜಡಿದು ಉಚ್ಚು ನತ್ತು
ಹುಲ್ಲಿನ೦ತೆ ವೇಣಿ ಕೆತ್ತು

ಹಿಚುಕಿ ಬೀಡು ಅವಳ ಕತ್ತು
ಸತ್ತು ಬಿಡಲಿ ಒಮ್ಮೇ ಅತ್ತು.